(Auge der Zeit: ಸೆಲಾನ್)
ಇದು ಕಾಲನ ಕಣ್ಣು:
ಅದು ಓರೆಯಾಗಿ ದಿಟ್ಟಿಸುತ್ತದೆ
ಸಪ್ತವರ್ಣದ ಕಣ್ಣಹುಬ್ಬಿನ ಕೆಳಗೆ.
ಅದರ ರೆಪ್ಪೆ ತೊಳೆಯಲ್ಪಡುವುದು ಬೆಂಕಿಯಿಂದ,
ಅದರ ಕಣ್ಣೀರು ಸುಡುವ ಆವಿ.

Auge der Zeit; Courtesy: Intercultural Philosophy and Art @ http://www.galerie-inter.de
ಕುರುಡುತಾರೆಗಳು ಹಾರುತ್ತವೆ ಅದರತ್ತ
ಮತ್ತು ಕರಗುತ್ತವೆ ಕಣ್ಣೆಮೆ ಮೇಲೆ ಅದರ ಬಿಸಿಗೆ:
ಅದು ಇನ್ನಷ್ಟು ಬಿಸಿಯಾಗುತ್ತಿದೆ ಜಗದಲ್ಲಿ
ಮತ್ತು ಸತ್ತಿರುವುದು
ಬೆಳೆಯುತ್ತಿದೆ ಮತ್ತು ಅರಳುತ್ತಿದೆ.

